ವರ್ಷ: 1995
ಸ್ಥಳ : ಗುಂಡಿಬೈಲ್ ನಲ್ಲಿ ಇರುವ ದೊಡ್ಡನ ಮನೆ ( ಅಜ್ಜಿ ಮನೆ )
ಈ ಮಕ್ಕಳನ್ನು ಹುಡುಕಲಿಕ್ಕೆ ಅರ್ಧ ಘಂಟೆ ಬೇಕು. ಸ್ವಲ್ಪ ದೊಡ್ಡ ಹೆಣ್ಣು ಮಕ್ಕಳು ಉಪ್ಪರಿಗೆಯಲ್ಲೋ, ಪಡ್ಸಾಲೆಯಲ್ಲೋ ಪಟ್ಟಾಂಗ ಹೊಡೆಯುತಿರಬಹುದು. ಚಿಕ್ಕ ಮಕ್ಕಳನ್ನು ಒಟ್ಟು ಮಾಡಿ ಬಟ್ಟಲ ಮುಂದೆ ಕೂರಿಸುವ ಜಾವಾಬ್ದಾರಿಯನ್ನು ಇವರಿಗೆ ವಹಿಸಿ ತಾವು ಬಡಿಸುವುದರಲ್ಲಿ ಮಗ್ನರಾದರು. ಗಂಡು ಮಕ್ಕಳೆಲ್ಲ ಬೆಳ್ಳಗೆಯೇ ಒಂದು ಬಟ್ಟಲು ಗಂಜಿ ತಿಂದು ಕ್ರಿಕೆಟ್ ಆಡಲು ಹೋದವರ ಪತ್ತೆಯೇ ಇಲ್ಲ. ತೋಟದ ತೆಂಗಿನ ಮರದ ಸಾಲಿನ ಮಧ್ಯಧಲ್ಲೋ, ನಾರು ಬುಡೆದಿ( ಹೆಂಡತಿ ) ಕಂಡದಲ್ಲೋ( ಗದ್ದೆಯಲ್ಲೋ ) ಆಡುತಿರಬಹುದು. ಅಲ್ಲಿ ಇಲ್ಲವಾದರೆ ಸಂಜು ಕಂಡದಲ್ಲಿ( ಗದ್ದೆಯಲ್ಲಿ ) ಇರುವ ಮಾವಿನ ಮರಕ್ಕೆ ಕಲ್ಲು ಹೊಡೆಯುತಿರಬಹುದು. ಆ ಸಂಜು ನೋಡಿದರೆ ಸಂಜೆ ಬಂದು ಚೊರೆ ಮಾಡುತಾನೆ. ಈ ಹುಡಗರಿಗೆ ಯಾರು ತಾನೇ ಹೇಳುತಾರೆ. ಪಟ್ಲಂ( ಮಕ್ಕಳ ಸೈನ್ಯ ) ನಲ್ಲಿ ದೊಡ್ಡವಳಾದ ಆಶಾ ಗಂಡು ಮಕ್ಕಳ ಗುಂಪನ್ನು ತೋಟದಲ್ಲಿ ಹಿಡಿದು ಬಾವಿ ಕಟ್ಟೆಗೆ ತಂದು ನಿಲ್ಲಿಸಿದಳು. ಗದ್ದೆ , ತೋಟದ ಧೂಳೆಲ್ಲ ಈ ಮಕ್ಕಳು ಹೊತ್ತು ತಂದಿದ್ದಾರೆ. "ಜಾನೆನಿ, ಗೊಬ್ಬರೇ ಪೋಥ್ಣನ?, ಕಂಡ ಅದ್ಪರೆ ಪೋಥ್ಣನ ?" ( ಏನೋ, ಆಡಲಿಕೆ ಹೊಗಿದ? ಗದ್ದೆ ಕೆಲಸ ಮಾಡಲಿಕ್ಕೆ ಹೊಗಿದ? ) ಎಂದು ಪೆಪಿ( ದೊಡಮ್ಮ ) ಕೇಳಿದರು. ಆ ಮಕ್ಕಳ ತಾಯಂದಿರು ಮಕ್ಕಳನು ಪಂಪ್ ಕೆಳಗೆ ನಿಲ್ಲಿಸಿ ಪಂಪ್ ಶುರು ಮಾಡಿದರು. ಮಕ್ಕಳು ಪಂಪ್ ನಿಂದ ಬರುವ ನೀರಲಿ ಆಡಲು ಶುರು ಮಾಡಿದರು. ಆಗಲೇ ಹನ್ನೆರಡುವರೆ ಆಗಿದೆ. ಇನ್ನು ಅರ್ಧ ಗಂಟೆಯಲ್ಲಿ ಆಕಾಶವಾಣಿಯಲ್ಲಿ ಚಿತ್ರಗೀತೆ ಶುರುವಾಗಿ ಬಿಡುತದೆ. ಈ ಮಕ್ಕಳಿಂದ ಒಂದು ದಿನವು ಚಿತ್ರಗೀತೆ ಕಾರ್ಯಕ್ರಮವನ್ನು ಪೂರ್ತಿ ಕೆಳಲಿಕೆ ಆಗೋಲ್ಲ.
ಮಕ್ಕಳು ಮಿಂದು ಬರುವ ಹೊತ್ತಿಗೆ ಚಾವಡಿಯಲ್ಲಿ ಸಾಲಾಗಿ ಬಟ್ಟಲು ಇಟ್ಟು ಅನ್ನ ಬಡಿಸಿಯಾಗಿದೆ . ಬೇಸಿಗೆ ರಜೆ ಇದ್ದು ಪರವೂರ ಮಕ್ಕಳೆಲ್ಲ ಬಂದಿರುವುದರಂದ ಪಂಕ್ತಿ ಬೋಜನದಲ್ಲಿ ಚಾವಡಿ ಬರ್ತಿಯಾಗಿದೆ. ಅಳಿಯಂದಿರು ಇದ್ದರೆ ಪಂಕ್ತಿ ಜಗಲಿಗೆ ಇಳಿದು ಹೋಗುತದೆ. ಅಯ್ಯೋ, ಈ ಗಂಡು ಮಕ್ಕಳ ಗೌಜಿನಲ್ಲಿ ಹೆಣ್ಣು ಮಕ್ಕಳ ನೆನಪೆ ಇಲ್ಲ. ಇವರನು ಹುಡುಕುವುದು ತುಂಬಾ ಸುಲಬ. ಉಪ್ಪರಿಗೆಯಲ್ಲಿ ಏನೋ ಆಟ (ಬಸ್ ಆಟ?) ಆಡುತಿರುತಾರೆ. ಅಂತು ಇಂತು ಮಕ್ಕಳನ್ನು ಒಟ್ಟು ಮಾಡಿ ಪಂಕ್ತಿ ಶುರುವಾಯಿತು. ಗಂಜಿಗೆ ಮಾಡಿದ ಕೆಂಪು ಅನ್ನ ತಿನ್ನಲಿಕ್ಕೆ ಕೆಲವರು ಉಪದ್ರ ಮಾಡಿದರೆ ಇನ್ನು ಕೆಲವರು ದಿನ ಸೌತೆಯ( ಸೌತೆಯನು ಬೆಳೆದು ಜಗಲಿಯುದಕು ಕಟಿರುತಾರೆ. ಯಾವುದಾದರೂ ಸೌತೆ ಹಣ್ನಾದರೆ ಅಂದು ಅದೇ ಪದಾರ್ಥ ) ಪದಾರ್ಥ ಎಂದು ಚೊರೆ ಮಾಡಲಿಕೆ ಶುರು ಮಾಡಿದರು. ಮಾತು ಮಾತು ಮಾತು. ಮಕ್ಕಳ ಮಾತು, ನಗು ಒಂದು ಕಡೆಯಾದರೆ ಹೆಂಗಸರ ಪಟ್ಟಾಂಗ ಇನ್ನೊಂದೆಡೆ. ಈ ಗೌಜಿನಲ್ಲಿ ಮಕ್ಕಳು ಎಷ್ಟು ತಿಂದರೋ ಆ ದೇವರಿಗೆ ಗೊತ್ತು. ಕಮ್ಮಿ ತಿಂದ ಮಕ್ಕಳಿಗೆಲ್ಲ ನಾಲ್ಕು ಘಂಟೆ ಮುಂಚೆ ಏನು ಸಿಗಲ್ಲ ಎಂಬ ಧಮ್ಕಿಯು ಬಿತ್ತು.
ಮಕ್ಕಳ ಪಂಕ್ತಿ ಎಬ್ಬಿಸಿದ ಮೇಲೆ ದೊಡ್ಡವರ ಪಂಕ್ತಿಯನ್ನು ಅಡಿಪಿಲ್ ನಲ್ಲೆ( ಅಡಿಗೆ ಮನೆ ) ಹಾಕುವ ನಿರ್ದಾರ ಮಾಡಿ, ಚಾವಡಿ ಯನ್ನು ಸಾರಿಸಿ ಮಕ್ಕಳಿಗೆ ಚಾಪೆ ಹಾಕಿದರು. ದೊಡ್ಡ ಚಾವಡಿಯಲ್ಲಿ ಇರುವುದು ಒಂದೇ ಫ್ಯಾನ್. ಮಕ್ಕಳಲ್ಲಿ ಫ್ಯಾನ್ ಕೆಳಗೆ ಮಲಗಲಿಕೆ ಜಗಳ ಶುರು ಆಯಿತು. ಚಿಕ್ಕಿ ( ಚಿಕಮ್ಮ ) ಏನೋ ಮಧ್ಯಸ್ತಿಕೆ ಮಾಡಿ, ಈಗ ಫ್ಯಾನ್ ನಿಂದ ದೂರ ಮಲಗಿದವರು ರಾತ್ರಿ ಫ್ಯಾನ್ ಕೆಳಗೆ ಮಲಗುತಾರೆ ಎಂದು ಹುಸಿ ಭರವಸೆ ನೀಡಿ ಜಗಳ ನಿಲ್ಲಿಸಿ ಊಟಕ್ಕೆ ಒಳಗೆ ಹೋದರು. ಹತ್ತು ನಿಮಿಷದಲ್ಲಿ ಚಾಪೆಯ ಬಣ್ಣದ ವಿಷಯವಾಗಿ ಮಕ್ಕಳಲ್ಲಿ ಜಗಳ ಶುರು ಆಯಿತು. ಒಳಗೆ ಊಟ ಮಾಡುತಿದ ತಾಯಂದಿರೆಲ್ಲ "ಜಾದೋ ಬೋದಂಡಲ ಅಂತ್ಹೊನದು" ( ಏನು ಬೇಕಾದರು ಮಾಡಿಕೊಳ್ಳಿ) ಎಂದು ಇನ್ನು ಮುಂದೆ ಅಮ್ಮನ ಮನೆಗೆ ಬರುವಾಗ ಈ ಮಕ್ಕಳನು ಕರೆತರಬಾರದು ಎಂದು ನಿರ್ಧರಿಸಿದರು. ಅರ್ಧ ಊಟ ಆಗುವಾಗ ಮಕ್ಕಳ ಗಲಾಟೆ ನಿಂತಿತು. ಅಯ್ಯೋ ಚಿತ್ರಗೀತೆ ಕಾರ್ಯಕ್ರಮ ಶುರು ಆಗೇ ಬಿಟ್ಟಿತು.
ಅಂತು ಊಟ ಮುಗಿಸಿ, ನೆಲ ಸಾರಿಸಿ, ಚಾವಡಿಗೆ ಬಂದರೆ ಮಕ್ಕಳು ಚಾವಡಿಯನ್ನು ಪೂರ್ತಿಯಾಗಿ ಆಕ್ರಮಿಸಿದಾರೆ. ಇನ್ನು ಚಾವಡಿ ಸಂಧಿಯಲ್ಲಿ ಕೆಲವರು ಮಲಗಿದರೆ ಮತ್ತೆ ಕೆಲವರು ಜಗಲಿಯಲ್ಲೇ ಪವಡಿಸಿದರು. ಎರಡು ಘಂಟೆಗೆ ಚಿತ್ರಗೀತೆ ಕಾರ್ಯಕ್ರಮ ಮುಗಿದು ವಾರ್ತೆ ಶುರು ಆಯಿತು. ಚಿತ್ರಗೀತೆ ಕಾರ್ಯಕ್ರಮ ಮುಗಿದ ಮತ್ತು ಯಾವುದು ಹೊಸ ಹಾಡು ಬರಲ್ಲಿಲ ಎಂಬ ಬೇಸರ ಕೆಲವರಲ್ಲಿ. ಇನ್ನು ನಾಳೆ ಮಾಧ್ಯನದವರೆಗೆ ಈ ಕಾರ್ಯಕ್ರಮಕ್ಕೆ ಕಾಯಬೇಕು. ನಾಳೆಯಾದರು ಬೇಗ ಊಟ ಮುಗಿಸಿ ಪೂರ್ತಿ ಹಾಡುಗಳನು ಕೇಳಬೇಕು.
ನನ್ನ ಬಾಲ್ಯದಲ್ಲಿ ಕನ್ನಡ ಚಿತ್ರಗೀತೆಗಳನು ಕೇಳುತಿದ ರೀತಿ ಇದು.
ವರ್ಷ: 2012
ಸ್ಥಳ : ಅಂಬಲಪಾಡಿ
ಆದಿತ್ಯ ನಾಲ್ಕು ವರ್ಷ ವಯಸಿನ ನನ್ನ ಅಕ್ಕನ ಮಗ. ನಾನು ಊರಿಗೆ ಬಂದ ವಿಷಯ ಗೊತಾದ ಕೂಡಲೇ ನಮ್ಮೆ ಮನೆಗೆ ಓಡಿ ಬರುತಾನೆ.
ಆದಿತ್ಯ: " ಮಾಮ, ಮೊಬೈಲ್ ಕೊಲ್ನಿ" ( ಮಾಮ, ಮೊಬೈಲ್ ಕೊಡು )
ನಾನು : " ಜೆಗೆನಿ ಮೊಬೈಲ್ " ( ಯಾಕೋ ಮೊಬೈಲ್ )
ಆದಿತ್ಯ: " ಎಂಕು ಪದ ಕೆನೋದು " ( ನನಗೆ ಹಾಡು ಕೇಳಬೇಕು )
-ನಿತಿನ್